ಬಲು ಅಧ್ಭುತ ಈ ಬಂಧ
ಕಣ್ಣು ಕೈಯ ಅನುಬಂಧ
ಯಾರಿಗುಂಟು ಯಾರಿಗಿಲ್ಲ
ಈ ನಂಟಿಗೆ ಸರಿಸಾಟಿಯಿಲ್ಲ
ಕೈಯಿಗೆ ನೋವಾದಾಗ
ಕಂಬನಿ ಸುರಿಸುವುದು ಕಣ್ಣು
ಕಂಬನಿ ಸುರಿವಾಗ
ಸಾಂತ್ವನ ಹೇಳುವುದು ಕೈಯಿ
ಬಲು ಅಪರೂಪ ಈ ಜೋಡಿ
ಯಾವುದೇ ತ್ಯಾಗಕ್ಕೂ ಇವರು ರೆಡಿ
ಮೊಂಬತ್ತಿ ದಾರದ ಗೆಳೆತನ
ಅದರಲ್ಲುಂಟು ಏನೋ ಒಂದು ಸೆಳೆತ
ಮೊಮ್ಬತ್ತಿಯನ್ನು ಉರಿಸುವಾಗ
ಬೆಳಕ ನೆಡಲು ಉರಿವುದು ದಾರ
ಹೃದಯದಲ್ಲಿರುವ ಗೆಳೆಯ ಉರಿದುಹೊದಾಗ
ಕಂಬನಿ ಸುರಿಸಿ ಕರಗುವುದು ಮೊಂಬತ್ತಿ ಆಗ
ನನ್ನ ನಿನ್ನ ಸ್ನೇಹ
ಮೋಸದ ಭಾವ
ಏಕೆ ನನ್ನ ಬಿಟ್ಟು ಹೋದೆ ಒಂಟಿ
ಕಾಲನೊಂದಿಗೆ ನಾನಗುತ್ತಿದ್ದೆ ನಿನಗೆ ಜಂಟಿ
ದರ್ಶಿ , ನೀನಿಲ್ಲದ ಜಗ
ನೋವಿನ ನೊಗ
ಕಾಣದೆ ನಿನ್ನ ಮೊಗ
ಆಗಿರುವೆ ನಾ ಮೂಕ
No comments:
Post a Comment